ಇವತ್ತು ರಾತ್ರಿ, ಅಂದರೆ 14ರ ಬೆಳಗಿನ ಹೊತ್ತು ಒಂದು ಗಂಟೆ ಮಾಯವಾಗಿಬಿಡುತ್ತದೆ.
ಗಡಿಯಾರದಲ್ಲಿ 1.59.59 ಆದ ತಕ್ಷಣ ಗಂಟೆಯು 3.00.00ಕ್ಕೆ ಹಾರುತ್ತದೆ.
ನಡುವಿನ 2.00.00ರಿಂದ 2.59.59ರ ವರೆಗಿನ ಸಮಯ ಗುಳುಂ .
ಇಲ್ಲಿ ... ಅಮೆರಿಕಾದಲ್ಲಿ . . . DST - day light saving time, ''ದಿನ ಬೆಳಕು ಉಳಿಸುವ ಸಮಯ'' ನಾಳೆಯಿಂದ ಆರಂಭ. ನವೆಂಬರ್ 7ರ ವರೆಗೆ.
ನವೆಂಬರ್ 7ರ ರಾತ್ರಿ ಗಡಿಯಾರದಲ್ಲಿ 1.59.59 ಆದ ತಕ್ಷಣ ಗಂಟೆಯು ಹಿಂದಕ್ಕೆ ಓಡಿ ಮತ್ತೆ 1.00.00ರಿಂದ ಶುರುವಾಗುತ್ತದೆ.
Spring (ವಸಂತ ಋತು) ನಲ್ಲಿ ಮುಂದೋಡಿದ ಸಮಯವನ್ನು ಮತ್ತೆ Fall (ಶರದ್ ಋತು) ನಲ್ಲಿ ಹಿಂದಕ್ಕೆ ಎಳೆಯುವ ಸರ್ಕಸ್ !
ಇದೇ spring forward ... fall back ...!!!
ಭೂಮಧ್ಯ ರೇಖೆಯಿಂದ ಉತ್ತರಕ್ಕೆ ಮತ್ತು ದಕ್ಷಿಣಕ್ಕೆ ಹೋದಂತೆಲ್ಲಾ ಬೇಸಗೆ ಕಾಲದಲ್ಲಿ ಹಗಲು ಹೆಚ್ಚು, ಚಳಿಗಾಲದಲ್ಲಿ ಕಡಿಮೆ ಹಗಲು. ಸೂರ್ಯೋದಯ ಸೂರ್ಯಾಸ್ತ ಸಮಯಗಳಲ್ಲೂ ವ್ಯತ್ಯಾಸ ಕಾಣುತ್ತೇವೆ. ಈ ವ್ಯತ್ಯಾಸ ಭೂಮಧ್ಯ ರೇಖೆಯ ಹತ್ತಿರವಿರುವ ದೇಶಗಳಲ್ಲಿ ಅನುಭವಕ್ಕೆ ಬರುವುದಿಲ್ಲ.

ನಾನಿರುವ ಊರು ಭೂಮಧ್ಯ ರೇಖೆಯಿಂದ 37° 20' ಉತ್ತರಕ್ಕಿದೆ.
ಬೇಸಗೆ ಕಾಲದಲ್ಲಿ ಇಲ್ಲಿನ ಸೂರ್ಯ ರಾತ್ರಿ ಎಂಟು ಗಂಟೆಯ ವರೆಗೂ ಬೆಳಗುತ್ತಾನೆ. ಅದೇ ಚಳಿಗಾಲದಲ್ಲಿ ಮಾತ್ರ ಸಂಜೆ ಐದಕ್ಕೇ ಟಾಟಾ ಹೇಳಿ ಹೊರಟು ಬಿಡುತ್ತಾನೆ.
ಅದಕ್ಕೇ ... ಬೇಸಗೆಯಲ್ಲಿ ಹೆಚ್ಚು ಸಿಗುವ ಸೂರ್ಯನ ಶಾಖವನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಲು ಅವನಿಗೇ ಕನ್ಫ್ಯೂಶನ್ ಮಾಡಿ, ಗಂಟೆಯನ್ನು ಮುಂದಕ್ಕೆ ಓಡಿಸಿದರೆ, ಒಂದು ಗಂಟೆ ಲೇಟಾಗಿ ಆತ ಟಾಟಾ ಹೇಳುತ್ತಾನಲ್ಲ !
ಸೂರ್ಯ ರಾತ್ರಿ ಒಂಬತ್ತು ಗಂಟೆಯ ವರೆಗೂ ಕಾಣುತ್ತಾನೆ. ದಿನದಲ್ಲಿ ಬೆಳಕಿನ ಸಮಯ ಹೆಚ್ಚು ಸಿಗುತ್ತದೆ.
ಮನೆಯೊಳಗೆ ಉರಿಯುವ ದೀಪ ಲೇಟಾಗಿ ಆನ್ ಆಗುತ್ತದೆ. ವಿದ್ಯುತ್ ಕಡಿಮೆ ಬಳಕೆಯಾಗುತ್ತದೆ !!!
ಅದೇ ಆ . . . ನೂರು ಡಾಲರ್ ನೋಟಿನ ಮೇಲೆ ಸಪಾಟಾಗಿರುವ ಬಿಳಿ ಗುಂಗುರು ಕೂದಲಿನ ಅಜ್ಜ.
ಆತ 1784ರಲ್ಲಿ ಒಂದು ಬಾರಿ ಪ್ಯಾರಿಸ್ ಗೆ ಹೋಗಿದ್ದ. ಅಲ್ಲಿನ ಕುಟುಂಬಗಳು ಬೇಸಗೆ ಕಾಲದ ಬೆಳಗಿನ ನೈಸರ್ಗಿಕ ಬೆಳಕನ್ನು ಉಪಯೋಗ ಮಾಡದೆ, ಸಾಯಂಕಾಲ ಕ್ಯಾಂಡಲ್ ದೀಪ ಉರಿಸಿ ಅನಗತ್ಯ ಖರ್ಚು ಮಾಡುತ್ತಾರೆ ಎನ್ನುವ ಬಗ್ಗೆ ಲೇಖನ ಬರೆದ. [ ಲೇಖನದ ಪೂರ್ಣ ಪಾಠ ಇಲ್ಲಿದೆ > http://www.webexhibits.org/daylightsaving/franklin3.html ]
ಈ ಐಡಿಯಾವನ್ನು 1895ರಲ್ಲಿ ಕೀಟತಜ್ಞ ಜಾರ್ಜ್ ಹಡ್ಸನ್ ತನ್ನ ಲೇಖನವೊಂದರಲ್ಲಿ ಗಂಭೀರವಾಗಿ ಪ್ರತಿಪಾದಿಸಿದ. 1905ರಲ್ಲಿ ಬ್ರಿಟನ್ ನ ವಿಲಿಯಮ್ ವಿಲ್ಲೆಟ್ ಕೂಡ ಈ ಬಗ್ಗೆ ತನ್ನ ಕಲ್ಪನೆಯನ್ನು ಮುಂದಿಟ್ಟ. ಆತ ಮುಂಜಾನೆ ವಾಕಿಂಗ್ ಹೋಗುತ್ತಿದ್ದ ಸಮಯದಲ್ಲಿ ಬಹಳಷ್ಟು ಮಂದಿ ಮನೆಯ ಕಿಟಿಕಿಗಳನ್ನು ತೆರೆಯದೆ ಇನ್ನೂ ನಿದ್ರಿಸುತ್ತಿದ್ದರು. ಅದನ್ನು ಕಂಡು ಆತ ಅಂದದ್ದು, 'what a waste of daylight' !

ದಿನ ಬೆಳಕು ಉಳಿಸುವ ಸಮಯದ ಕಲ್ಪನೆ ಮುಂದೆ ಸರಿಯಾಗಿ ಜಾರಿಗೆ ಬಂದದ್ದು ಮೊದಲ ವಿಶ್ವ ಯುದ್ಧದ ಕಾಲದಲ್ಲಿ.
ನಂತರದ ವರುಷಗಳಲ್ಲಿ ಹಲವಾರು ದೇಶಗಳು ತಮಗೊಪ್ಪಿಗೆಯಾಗುವ ರೀತಿಗಳಲ್ಲಿ ದಿನದ ಬೆಳಕನ್ನು ಉಳಿಸುತ್ತಾ ಬಂದಿವೆ.
ಯುರೋಪ್ ಯುನಿಯನ್ ದೇಶಗಳು ಇದನ್ನು 'ಸಮ್ಮರ್ ಟೈಮ್' ಎಂದು ಕರೆಯುತ್ತವೆ.
DSTಯಿಂದ ಉಪಯೋಗ, ಉಳಿತಾಯ ಏನು ಎಷ್ಟೋ ಗೊತ್ತಿಲ್ಲ, ಆದರೆ ಇದರ ಉಪಯುಕ್ತತೆಯ ಬಗ್ಗೆ ವಾದ - ವಿವಾದ, ಚರ್ಚೆಗಳು ಇನ್ನೂ ಮುಂದುವರೆದಿದೆ.
ಸಾಮಾನ್ಯ ಜನಜೀವನ ಏರುಪೇರು ಆಗುವ ಪ್ರಸಂಗಗಳು ಈ ಸಮಯ ಬದಲಾವಣೆಯಾಗುವ ಸಂದರ್ಭದಲ್ಲಿ ನಡೆಯುತ್ತವೆ.
ಅಕ್ಟೋಬರ್-ನವೆಂಬರ್ ನಲ್ಲಿ ಕಾಲ ಒಂದು ಗಂಟೆ ಹಿಂದೆ ಸರಿಯುವಾಗ, ಟೈಮ್ ಟೇಬಲ್ ಪ್ರಕಾರ ಓಡುತ್ತಿರುವ ರೈಲುಗಳು 1.59.59ಕ್ಕೆ ಓಡುವುದನ್ನು ನಿಲ್ಲಿಸಿ ಮತ್ತೆ ಒಂದು ಗಂಟೆಯ ನಂತರ ಹೊರಡುತ್ತವೆ.
ಮಾರ್ಚ್ ನಲ್ಲಿ ಸಮಯ ಒಂದು ಗಂಟೆ ಮುಂದೆ ಓಡುವಾಗ 2.00.00ರಿಂದ 2.59.59ರ ವರೆಗೆ ಎಲ್ಲಿಯೂ ಯಾವ ಆಸ್ಪತ್ರೆಯಲ್ಲೂ ಮಕ್ಕಳು ಹುಟ್ಟುವುದಿಲ್ಲ. ಅದೇ ಒಂದು ಗಂಟೆ ಹಿಂದೆ ಸರಿದಾಗ ಅವಳಿ ಜವಳಿ ಮಕ್ಕಳೇನಾದರೂ ಹುಟ್ಟಿದ್ದಲ್ಲಿ ಅವಾಂತರ.
ನವೆಂಬರ್ 2007ರಲ್ಲಿ, ಅಮೆರಿಕಾದ ನಾರ್ತ್ ಕರೋಲಿನಾದ ಲಾರಾ ಸಿರಿಯೋಲಿ, ಪೀಟರ್ ಎನ್ನುವ ಗಂಡು ಮಗುವಿಗೆ ಜನ್ಮ ನೀಡಿದಳು. ಆತ ಹುಟ್ಟಿದ್ದು 1.32 am.
ಮೂವತ್ತನಾಲ್ಕು ನಿಮಿಷದ ನಂತರ ಆಲಿಸನ್ ಹುಟ್ಟಿದ.
ಆ ದಿನ DST ಸಮಯ ಬದಲಾವಣೆ ಆಗುವ ದಿನವಾದ್ದರಿಂದ, ಒಂದು ಗಂಟೆ ಹಿಂದಕ್ಕೆ ಹೋಯಿತು.
ಆಲಿಸನ್ ಹುಟ್ಟಿದ್ದು 1.06 am ಗೆ ದಾಖಲಾಯಿತು.
[photo courtesy : wikipedia and timeanddate.com ]

6 comments:
ಈ DST ಅನ್ನೋದು ಒಂದು ಮೂರ್ಖ concept ಅಂತ ನನಗೆ ಅನ್ನಿಸುತ್ತದೆ. ಈಗ ನೋಡಿ, ಕರ್ನಾಟಕದ ಉತ್ತರಭಾಗದ ಜಿಲ್ಲೆಗಳಲ್ಲಿ, ಬೇಸಿಗೆಯ ಸಮಯದಲ್ಲಿ ಎಲ್ಲ ಸಾರ್ವಜನಿಕ ಕಾರ್ಯಾಲಯಗಳು ಮಧ್ಯಾಹ್ನ ೧:೩೦ ಗಂಟೆಗೆ ಮುಚ್ಚಿ ಬಿಡುತ್ತವೆ. ಅಮೇರಿಕನ್ ಪದ್ಧತಿಯ ಮೇರೆಗೆ ೧:೩೦ಕ್ಕೆ ಬಹುಶ: ೫:೩೦ ಎಂದು ಕರೆಯುತ್ತಿದ್ದರೇನೊ?
ಈ ಪದ್ದತಿಯ ಮೂಲದ ಬಗ್ಗೆ ಬರೆದುದಕ್ಕೆ ಧನ್ಯವಾದಗಳು. ಇಲ್ಲಿ ಸ್ವೀಡನ್ನಲ್ಲಿ ಇದೆ ತಿಂಗಳ ೨೮ ರಂದು summer time ಆರಂಭ. ಜನ ಈ ಸಮಯ ತೂಕ ಕಮ್ಮಿ ಮಾಡ್ಕೊಂಡು slim & trim ಆಗ್ತಾರೆ. ಪ್ರಕೃತಿ ಗಂಟೆ ಮಾಡಿಕೊಳ್ಳೋದು! :-)
ಅಬ್ಬಾ, ತುಂಬ ಗೋಜಲು ಗೋಜಲು ಅನಿಸಿತು. ಅವಳಿ ಮಕ್ಕಳ ಅವಾಂತರವೇ ಸಾಕು. ನಾನೂ ಕೂಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಯು.ಎಸ್. ಸಹೋದ್ಯೋಗಿಗಳ ಜೊತೆ ವ್ಯವಹರಿಸುವಾಗ ಇದು ಅನುಭವವಾಗುತ್ತಿತ್ತು. ಒಂದೆರಡು ದಿನ ಆದಮೇಲೆ ಮತ್ತೆ ಯಥಾ ಸ್ಥಿತಿಗೆ ಬರುತ್ತಿದ್ದೆವು
Time keeping is made unnecessarily complicated by this DST system. It would have been far better to adjust your days during summer/winter, by either starting an hour early or an hour later instead of altering the time itself. I really don't see how DST actually helps you save 'daylight'.
@ Sunaath sir,
DST as a concept is exciting, but logically there no 'Saving' happening here for real. That too in the land of Uncle Sam, where most of the offices, shops and malls keep their lights on 24X7. It is just a make believe.
@ Satya,
itz time to trim and slim :)
@ Deepasmitha Sir,
Yes, it is weird because we Indians and rest of the tropical countries do not relate to the seasonal swings, but this DST idea very well works for Temperate zones, however foolish it is.
@ Sudhamshu,
It is a complex system:)
but then, Collective effort is more effective than individual motivation. So from that aspect, imposed DST would work efficiently!
the Applied Idea - the hidden flow of the current is that ... allow people to go out ... enjoy more ... keep the spirits high ... help those who consume BIG and increase the productivity of a BIG Nation ;)
interesting...
Post a Comment